ISIRI
HomeAboutEventsGalleryTeamSign in
Sign in

ಇಸಿರಿ

ಕನ್ನಡ ಸಮಿತಿ · ಭಾಷೆ, ಕಲೆ ಮತ್ತು ಸಮುದಾಯದ ಪೋಷಣೆ.

ಮುಖಪುಟನಮ್ಮ ಬಗ್ಗೆಕಾರ್ಯಕ್ರಮಗಳುಚಿತ್ರಸಂಗ್ರಹ
ವರ್ಷಗಳುತಂಡಮೇಜು
Made with ❤️ By Finite Loop Club

© 2026 ಇಸಿರಿ ಕನ್ನಡ ಸಮಿತಿ. ಎಲ್ಲಾ ಹಕ್ಕುಗಳು ಕಾಯ್ದಿರಿಸಲಾಗಿದೆ.

ಪ್ರಸ್ತುತ ವರ್ಷ

೨೦೨೬–೨೭

ಎತ್ತಿ ತೋರಿಸಿದ · ಏಕವ್ಯಕ್ತಿ · ತೆರೆದಿದೆ

ದಿವ್ಯಾಂಕುರ

'ದಿವ್ಯಾಂಕುರ'ವು ನಿಟ್ಟೆಯ ಎನ್.ಎಂ.ಎ.ಎಂ. ತಾಂತ್ರಿಕ ಸಂಸ್ಥೆ (NMAMIT) ಕನ್ನಡ ಸಂಘವಾದ 'ಐಸಿರಿ'ಯಿಂದ ಪ್ರಮುಖವಾಗಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲ್ಪಡುವ ವಾರ್ಷಿಕ ಸಂಭ್ರಮವಾಗಿದೆ. ಈ ಕಾರ್ಯಕ್ರಮವು ಕನ್ನಡ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಹಾಗೂ ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಎತ್ತಿಹಿಡಿಯುತ್ತದೆ. ಇದರ ಜೊತೆಗೆ 'ಮಂಜರಿ ಸರಣಿ'ಯ ಸಾಹಿತ್ಯಿಕ ಮತ್ತು ಸೃಜನಶೀಲ ಸ್ಪರ್ಧೆಗಳಾದ ಪ್ರಶ್ನಾಮಂಜರಿ, ಸ್ವರಮಂಜರಿ, ಚಿತ್ರಮಂಜರಿ ಮತ್ತು ಕಾವ್ಯಮಂಜರಿಗಳನ್ನು ನಡೆಸಲಾಗುತ್ತದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮುಖ್ಯ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಗುತ್ತದೆ. ಈ ಆಚರಣೆಯು ಸಾಂಪ್ರದಾಯಿಕ ಮೆರವಣಿಗೆಗಳು, ಜಾನಪದ ನೃತ್ಯಗಳು, ಸಂಗೀತ, ಯಕ್ಷಗಾನ, ರಂಗಭೂಮಿ ಪ್ರದರ್ಶನಗಳು ಹಾಗೂ ಗಣ್ಯ ಅತಿಥಿಗಳ ಸ್ಪೂರ್ತಿದಾಯಕ ಭಾಷಣಗಳ ಮೂಲಕ ಕನ್ನಡ ಸಂಸ್ಕೃತಿಗೆ ಮರುಜೀವ ನೀಡುತ್ತದೆ. ದಿವ್ಯಾಂಕುರವು ಕರ್ನಾಟಕದ ಸಾಂಸ್ಕೃತಿಕ ಅನನ್ಯತೆಯನ್ನು ಕೊಂಡಾಡುತ್ತಾ, ವಿದ್ಯಾರ್ಥಿಗಳಲ್ಲಿ ಕನ್ನಡದ ಶಾಶ್ವತ ಭಾವನೆಯನ್ನು ಗೌರವಿಸಲು ಮತ್ತು ಸಂರಕ್ಷಿಸಲು ಪ್ರೇರೇಪಿಸುತ್ತದೆ.

ಯಾವಾಗ
೨೦೨೬-೨೭
ಎಲ್ಲಿ
ಕ್ಯಾಂಪಸ್
ನೋಡಿ

ಕಾರ್ಯಕ್ರಮ · ಏಕವ್ಯಕ್ತಿ · ಮುಚ್ಚಿದೆ

ಪದಪ್ರಭಾ – ಪದಗಳ ಸಂಗಮ, ಪ್ರತಿಭೆಯ ಸಂಭ್ರಮ

ಕನ್ನಡದ ಕಂಪನ್ನು ಪಸರಿಸಿ, ಪದಗಳ ಲೋಕದಲ್ಲಿ ಸೃಜನಶೀಲತೆಯ ಬೆಳಕನ್ನು ಚೆಲ್ಲುವ ಉದ್ದೇಶದಿಂದ ಪದಪ್ರಭಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪದಬಂಧ ಸ್ಪರ್ಧೆಯ ಮೂಲಕ ಬುದ್ಧಿವಂತಿಕೆಯ ಸವಾಲು, ಪ್ರಬಂಧ ಸ್ಪರ್ಧೆಯ ಮೂಲಕ ಕಲ್ಪನೆಗಳ ಅಭಿವ್ಯಕ್ತಿ ಹಾಗೂ ಆಶುಭಾಷಣ ಸ್ಪರ್ಧೆಯ ಮೂಲಕ ತಕ್ಷಣದ ಚಿಂತನೆ ಮತ್ತು ವಾಕ್ಚಾತುರ್ಯಕ್ಕೆ ವೇದಿಕೆ ಕಲ್ಪಿಸಲಾಯಿತು. ಪ್ರತಿಯೊಂದು ಪದದಲ್ಲೂ ಜ್ಞಾನದ ಸೊಗಡು, ಪ್ರತಿಯೊಂದು ಬರಹದಲ್ಲೂ ಭಾವನೆಗಳ ಮಿಡಿತ ಹಾಗೂ ಪ್ರತಿಯೊಂದು ಮಾತಿನಲ್ಲೂ ಆತ್ಮವಿಶ್ವಾಸ ಅನಾವರಣಗೊಂಡಿತು. ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆಯಿಂದ ಕಂಗೊಳಿಸಿದ ಈ ಕಾರ್ಯಕ್ರಮವು ಕನ್ನಡ ಭಾಷೆಯ ಸೌಂದರ್ಯ, ಸಾಹಿತ್ಯದ ಶ್ರೀಮಂತಿಕೆ ಮತ್ತು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಸಾರ್ಥಕ ವೇದಿಕೆಯಾಯಿತು.

ಯಾವಾಗ
ನಂತರ ಘೋಷಣೆ
ಎಲ್ಲಿ
ಕ್ಯಾಂಪಸ್
ನೋಡಿ

ಕಾರ್ಯಕ್ರಮ · ತಂಡ · ಮುಚ್ಚಿದೆ

ಪ್ರಶ್ನಾಮಂಜರಿ – ಕನ್ನಡ ರಸಪ್ರಶ್ನೆಗಳ ಮೂಲಕ ಜ್ಞಾನಾನ್ವೇಷಣೆ

ಪ್ರಶ್ನಾಮಂಜರಿ ಐಸಿರಿ ಕನ್ನಡ ಸಮಿತಿ ಮತ್ತು ಗ್ರೇ ಮ್ಯಾಟರ್ನ ಸಹಯೋಗದೊಂದಿಗೆ ಆಯೋಜಿಸಲಾಗುವ ರಸಪ್ರಶ್ನೆ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯು ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ, ತಾರ್ಕಿಕ ಚಿಂತನೆ ಮತ್ತು ತ್ವರಿತವಾಗಿ ಉತ್ತರಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳು 1ರಿಂದ 3 ಸದಸ್ಯರನ್ನು ಒಳಗೊಂಡ ತಂಡಗಳಾಗಿ ಭಾಗವಹಿಸಬಹುದು. ಸ್ಪರ್ಧೆಯು ಪ್ರಾಥಮಿಕ ಮತ್ತು ಅಂತಿಮ ಸುತ್ತುಗಳನ್ನು ಒಳಗೊಂಡಿದ್ದು, ಭಾಗವಹಿಸುವವರು ನಿಗದಿತ ಸಮಯದೊಳಗೆ ಪ್ರಶ್ನೆಗಳಿಗೆ ಉತ್ತರಿಸಬೇಕು. ವಿಜೇತರಿಗೆ ದಿವ್ಯಾಂಕುರ ಕಾರ್ಯಕ್ರಮದ ಸಂದರ್ಭದಲ್ಲಿ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಯಾವಾಗ
ನಂತರ ಘೋಷಣೆ
ಎಲ್ಲಿ
ಕ್ಯಾಂಪಸ್
ನೋಡಿ

ಕಾರ್ಯಕ್ರಮ · ಏಕವ್ಯಕ್ತಿ · ಮುಚ್ಚಿದೆ

ಕಾವ್ಯಮಂಜರಿ – ಪದಗಳಲ್ಲಿ ಭಾವನೆಗಳ ಅಭಿವ್ಯಕ್ತಿ

ಕಾವ್ಯಮಂಜರಿ ಐಸಿರಿ ಕನ್ನಡ ಸಮಿತಿಯು ಆಯೋಜಿಸುವ ಕಾವ್ಯರಚನಾ ಸ್ಪರ್ಧೆಯಾಗಿದ್ದು, ವಿದ್ಯಾರ್ಥಿಗಳ ಕಾವ್ಯಪ್ರತಿಭೆ, ಸೃಜನಶೀಲತೆ ಮತ್ತು ಕಲ್ಪನಾಶಕ್ತಿಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಸಮಿತಿಯು ನೀಡುವ ನಿರ್ದಿಷ್ಟ ವಿಷಯದ ಆಧಾರದ ಮೇಲೆ ತಮ್ಮದೇ ಆದ ಕವಿತೆಗಳನ್ನು ರಚಿಸಬೇಕು. ಇದು ವಿದ್ಯಾರ್ಥಿಗಳಿಗೆ ತಮ್ಮ ಆಲೋಚನೆಗಳನ್ನು ಕಾವ್ಯದ ಮೂಲಕ ವ್ಯಕ್ತಪಡಿಸಲು ಮತ್ತು ತಮ್ಮ ಸಾಹಿತ್ಯಿಕ ಕೌಶಲ್ಯಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ವಿಜೇತರಿಗೆ ದಿವ್ಯಾಂಕುರ ಕಾರ್ಯಕ್ರಮದ ಸಂದರ್ಭದಲ್ಲಿ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಯಾವಾಗ
ನಂತರ ಘೋಷಣೆ
ಎಲ್ಲಿ
ಕ್ಯಾಂಪಸ್
ನೋಡಿ

ಕಾರ್ಯಕ್ರಮ · ಏಕವ್ಯಕ್ತಿ · ಮುಚ್ಚಿದೆ

ಸ್ವರಮಂಜರಿ – ಸ್ವರಗಳ ಸಂಗಮ, ಸಂಗೀತದ ಸಂಭ್ರಮ

ಸಂಗೀತದ ಸುಮಧುರ ಸ್ವರಗಳಲ್ಲಿ ಮನಸ್ಸಿಗೆ ಮುದ ನೀಡುತ್ತಾ, ಗಾಯನ ಪ್ರತಿಭೆಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಉದ್ದೇಶದಿಂದ ಸ್ವರಮಂಜರಿ ಆನ್ಲೈನ್ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಸಂಗೀತವು ಭಾಷೆ, ಭಾವನೆ ಮತ್ತು ಮನಸ್ಸುಗಳನ್ನು ಬೆಸೆಯುವ ಶಕ್ತಿಯುತ ಕಲೆಯಾಗಿದೆ. ಪ್ರತಿಯೊಂದು ಸ್ವರದಲ್ಲೂ ಒಂದು ಭಾವನೆ, ಪ್ರತಿಯೊಂದು ಹಾಡಿನಲ್ಲೂ ಒಂದು ಕಥೆ ಅಡಗಿರುತ್ತದೆ. ವಿದ್ಯಾರ್ಥಿಗಳಲ್ಲಿರುವ ಗಾಯನ ಕೌಶಲ್ಯವನ್ನು ಗುರುತಿಸಿ, ಅವರ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಸ್ಪರ್ಧಾರ್ಥಿಗಳು ತಮ್ಮ ಸುಮಧುರ ಕಂಠಸಿರಿಯಿಂದ ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿ, ತಮ್ಮ ಸಂಗೀತ ಪ್ರತಿಭೆಯನ್ನು ಅನಾವರಣಗೊಳಿಸಬಹುದು. ಆನ್ಲೈನ್ ಮೂಲಕ ನಡೆಯುವ ಈ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ತಮ್ಮ ಗಾಯನ ಕಲೆಯನ್ನು ಪ್ರದರ್ಶಿಸಲು ಹಾಗೂ ಸಂಗೀತದ ಮೇಲಿನ ಆಸಕ್ತಿ ಮತ್ತು ಅಭಿರುಚಿಯನ್ನು ಬೆಳೆಸಿಕೊಳ್ಳಲು ಅವಕಾಶ ನೀಡುತ್ತದೆ. ಸ್ವರಮಂಜರಿ ಸ್ವರಗಳ ಮಾಧುರ್ಯ, ಸಂಗೀತದ ಸೌಂದರ್ಯ ಮತ್ತು ಪ್ರತಿಭೆಯ ಸಂಭ್ರಮವನ್ನು ಒಟ್ಟುಗೂಡಿಸುವ ಒಂದು ವಿಶಿಷ್ಟ ವೇದಿಕೆಯಾಗಿದೆ. ವಿಜೇತರಿಗೆ ದಿವ್ಯಾಂಕುರ ಕಾರ್ಯಕ್ರಮದ ಸಂದರ್ಭದಲ್ಲಿ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಯಾವಾಗ
ನಂತರ ಘೋಷಣೆ
ಎಲ್ಲಿ
ಕ್ಯಾಂಪಸ್
ನೋಡಿ

ಕಾರ್ಯಕ್ರಮ · ಏಕವ್ಯಕ್ತಿ · ಮುಚ್ಚಿದೆ

ಚಿತ್ರಮಂಜರಿ – ಬಣ್ಣಗಳ ಲೋಕದಲ್ಲಿ ಸೃಜನಶೀಲತೆಯ ಅನಾವರಣ

ಬಣ್ಣಗಳ ಮೂಲಕ ಭಾವನೆಗಳಿಗೆ ಜೀವ ತುಂಬಿ, ಕಲ್ಪನೆಗಳಿಗೆ ರೂಪ ನೀಡಿ, ಸೃಜನಶೀಲತೆಯ ಸೌಂದರ್ಯವನ್ನು ಅನಾವರಣಗೊಳಿಸುವ ಉದ್ದೇಶದಿಂದ ಚಿತ್ರಮಂಜರಿ ಆನ್ಲೈನ್ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಪ್ರತಿಯೊಬ್ಬರ ಮನಸ್ಸಿನಲ್ಲಿರುವ ಕಲ್ಪನೆಗಳು ವಿಭಿನ್ನ ಬಣ್ಣಗಳ ರೂಪದಲ್ಲಿ ಕಾಗದದ ಮೇಲೆ ಅರಳುವಂತೆ ಮಾಡುವುದೇ ಈ ಕಾರ್ಯಕ್ರಮದ ಆಶಯ. ಚಿತ್ರಕಲೆ ಕೇವಲ ಬಣ್ಣಗಳ ಸಂಯೋಜನೆಯಲ್ಲ, ಅದು ಮನದ ಭಾವನೆಗಳು, ಆಲೋಚನೆಗಳು ಹಾಗೂ ಸೃಜನಶೀಲತೆಯನ್ನು ವ್ಯಕ್ತಪಡಿಸುವ ಒಂದು ಸುಂದರ ಮಾಧ್ಯಮವಾಗಿದೆ. ಈ ಆನ್ಲೈನ್ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಲು, ಹೊಸ ಆಲೋಚನೆಗಳಿಗೆ ರೂಪ ನೀಡಲು ಹಾಗೂ ತಮ್ಮ ಸೃಜನಶೀಲತೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ತಂತ್ರಜ್ಞಾನದ ನೆರವಿನಿಂದ ಆಯೋಜಿಸಲಾಗುವ ಈ ಸ್ಪರ್ಧೆಯು ಕಲೆಯ ಮೇಲಿನ ಆಸಕ್ತಿಯನ್ನು ಹೆಚ್ಚಿಸಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಪ್ರೇರಣೆ ನೀಡುತ್ತದೆ. ಬಣ್ಣಗಳ ಚಿತ್ತಾರದಲ್ಲಿ ಪ್ರತಿಭೆಯ ಹೊಳಪು ಮೂಡಿಸುವ ಚಿತ್ರಮಂಜರಿ, ಕಲ್ಪನೆ ಮತ್ತು ಕಲೆಯ ಸುಂದರ ಸಂಗಮವಾಗಿದೆ. ವಿಜೇತರಿಗೆ ದಿವ್ಯಾಂಕುರ ಕಾರ್ಯಕ್ರಮದ ಸಂದರ್ಭದಲ್ಲಿ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುತ್ತದೆ.

ಯಾವಾಗ
ನಂತರ ಘೋಷಣೆ
ಎಲ್ಲಿ
ಕ್ಯಾಂಪಸ್
ನೋಡಿ

ಕಾರ್ಯಕ್ರಮ · ಏಕವ್ಯಕ್ತಿ · ಮುಚ್ಚಿದೆ

ಊಸರವಳ್ಳಿ

ಊಸರವಳ್ಳಿಯು ತನ್ನ ಸುತ್ತಮುತ್ತಲಿನ ವಾತಾವರಣಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವಂತೆ, ನೀಡಲಾದ ವಿಷಯಕ್ಕೆ ಅನುಗುಣವಾಗಿ ತಮ್ಮ ಅಭಿಪ್ರಾಯ ಮತ್ತು ವಾದಗಳನ್ನು ಬದಲಾಯಿಸುವ ವಿಶಿಷ್ಟ ಸ್ಪರ್ಧೆಯೇ 'ಊಸರವಳ್ಳಿ'. ಈ ಕಾರ್ಯಕ್ರಮವು ಭಾಗವಹಿಸುವವರ ತಾರ್ಕಿಕ ಚಿಂತನೆ, ವಾಕ್ಚಾತುರ್ಯ, ಸಮಯಪ್ರಜ್ಞೆ ಮತ್ತು ಯಾವುದೇ ವಿಷಯದ ಪರ ಹಾಗೂ ವಿರುದ್ಧವಾಗಿ ತಮ್ಮ ವಾದಗಳನ್ನು ಮಂಡಿಸುವ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ನಮ್ಮ ಕನ್ನಡ ಸಮಿತಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ 'ಊಸರವಳ್ಳಿ', ಭಾಗವಹಿಸುವವರಿಗೆ ವಿಭಿನ್ನ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ತಕ್ಷಣವೇ ಬದಲಾಯಿಸಿ, ಎರಡೂ ಬದಿಗಳ ಪರವಾಗಿ ಸಮರ್ಥವಾಗಿ ಮಾತನಾಡುವ ಅವಕಾಶವನ್ನು ಒದಗಿಸುತ್ತದೆ. ಇದು ಅವರ ಚಿಂತನಾ ಸಾಮರ್ಥ್ಯ, ಭಾಷಾ ಕೌಶಲ್ಯ ಮತ್ತು ವಾದ ಮಂಡಿಸುವ ಪ್ರತಿಭೆಯನ್ನು ಪ್ರದರ್ಶಿಸುವ ವಿಶಿಷ್ಟ ವೇದಿಕೆಯಾಗಿದೆ.

ಯಾವಾಗ
ನಂತರ ಘೋಷಣೆ
ಎಲ್ಲಿ
ಕ್ಯಾಂಪಸ್
ನೋಡಿ

ತಂಡ

ಕ್ಯಾಂಪಸ್ ಡೆಸ್ಕ್

ಸಂಯೋಜನೆ